Karnataka Budget 2024 25 Kannada PDF

2.22 MB / 65 Pages
0 likes
share this pdf Share
DMCA / report this pdf Report
Karnataka Budget 2024 25 Kannada
Preview PDF

Karnataka Budget 2024 25 Kannada

2024- 25ನೇ ಸಾಲಿನ ರಾಜ್ಯ ಬಜೆಟ್ ಮಂಡನೆ ಮಾಡಿರುವ ಸಿಎಂ ಸಿದ್ದರಾಮಯ್ಯ ಅವರು ವಿವಿಧ ಕ್ಷೇತ್ರಗಳಿಗೆ ಹಲವು ಘೋಷಣೆಗಳನ್ನು ಮಾಡಿದ್ದಾರೆ. ಈ ಘೋಷಣೆಗಳಿಂದ ಸರ್ಕಾರದ ಮೇಲೆ ಬರುವ ಆರ್ಥಿಕ ಹೊರೆಯನ್ನು ತಗ್ಗಿಸಲು ಕೆಲವು ಹೊಸ ಸೆಸ್‌ಗಳನ್ನೂ ಪ್ರಕಟಿಸಿದ್ದಾರೆ. ಈ ಮೂಲಕ ಹೆಚ್ಚುವರಿ ವೆಚ್ಚಗಳನ್ನು ಸರಿದೂಗಿಸುವ ಆದಾಯ ಪಡೆಯಲು ರಾಜ್ಯ ಸರ್ಕಾರ ಮುಂದಾಗಿದೆ.

ರಾಜ್ಯ ಬಜೆಟ್‌ನಲ್ಲಿ ವಿವಿಧ ಉತ್ಪನ್ನ ಅಥವಾ ಸೇವೆಗಳ ಮೇಲೆ ಹೆಚ್ಚುವರಿ ಸೆಸ್ ಘೋಷಿಸಲಾಗಿದೆ. ಇವುಗಳ ನಿರ್ದಿಷ್ಟ ಮೊತ್ತವನ್ನು ಸಿಎಂ ಸಿದ್ದರಾಮಯ್ಯ ಉಲ್ಲೇಖಿಸಿಲ್ಲ. ಆದರೆ ಈ ನಿರ್ಧಾರದಿಂದ ಕೆಲವು ವಸ್ತುಗಳು, ಉತ್ಪನ್ನಗಳು ಹಾಗೂ ಸೇವೆಗಳು ದುಬಾರಿಯಾಗುವ ಸಾಧ್ಯತೆ ಇದೆ.

ನೋಂದಣಿ ಮತ್ತು ಮುದ್ರಾಂಕ

ರಾಜ್ಯ ಸರ್ಕಾರವು ಈಗಾಗಲೇ ಮುದ್ರಾಂಕ ಶುಲ್ಕವನ್ನು ಹೆಚ್ಚಳ ಮಾಡಿದೆ. ಅಫಿಡಿವಿಟ್, ಪಾರ್ಟಿಷನ್ ಸೇರಿ ಅನೇಕ ಶುಲ್ಕಗಳನ್ನು ಹೆಚ್ಚಳ ಮಾಡಲಾಗಿತ್ತು. ಈ ಹೆಚ್ಚಳದಿಂದ ರಾಜಸ್ವ ಸಂಗ್ರಹಣೆಯಲ್ಲಿ ಶೇ 10 ರಷ್ಟು ಏರಿಕೆಯಾಗಿದೆ. ಜನವರಿವರೆಗೂ 15,692 ಕೋಟಿ ಸಂಗ್ರಹವಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

2024- 25ನೇ ಸಾಲಿಗೆ ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ 26,000 ಕೋಟಿ ರೂ ರಾಜಸ್ವ ಸಂಗ್ರಹಣೆ ಗುರಿ ನಿಗದಿಪಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಹೊಸ ಕಟ್ಟಡಗಳಿಗೆ ಹೆಚ್ಚುವರಿ ತೆರಿಗೆ

ನೂತನವಾಗಿ ನಿರ್ಮಿಸುವ ಬಹು ಮಹಡಿ ಕಟ್ಟಡಗಳಿಂದ ಹೆಚ್ಚುವರಿ ತೆರಿಗೆ ವಿಧಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಈ ಹಣವನ್ನು ಅಗ್ನಿಶಾಮಕ ಇಲಾಖೆಯ ಸುಧಾರಣೆಗೆ ಬಳಸಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಅಗ್ನಿಶಾಮಕ ಇಲಾಖೆಯ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ದಿ ಕರ್ನಾಟಕ ಫೈರ್ ಫೋರ್ಸ್ ಆಕ್ಟ 1964ರ ಅನ್ವಯ ರಾಜ್ಯದಲ್ಲಿ ಹೊಸದಾಗಿ ನಿರ್ಮಾಣವಾಗುವ ಬಹುಮಹಡಿ ಕಟ್ಟಡಗಳಿಗೆ ಶೇ 1ರ ದರದಲ್ಲಿ ‘ಫೈರ್ ಸೆಸ್’ ವಿಧಿಸಲಾಗುವುದು ಎಂದು ತಿಳಿಸಿದ್ದಾರೆ.

ಅಮಿತ್ ಎಂ.ಎಸ್ ಅವರ ಬಗ್ಗೆ

Download Karnataka Budget 2024 25 Kannada PDF

Free Download
Welcome to 1PDF!